Google Search Console ಎಂದರೆ ಏನು? ಕನ್ನಡದಲ್ಲಿ ಪೂರ್ಣ ಮಾಹಿತಿ

Google Search Console (GSC) ಎಂದರೆ ಏನು? ಹೇಗೆ ಬಳಸಬೇಕು?

Google Search Console ಅಂದರೆ ನಿಮ್ಮ ವೆಬ್‌ಸೈಟ್ Google ನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ನೋಡಿ ತಿಳಿಯುವ ಗೂಗಲ್‌ನ ಉಚಿತ ಟೂಲ್.
ಇದು ನಿಮ್ಮ SEO ಫಲಿತಾಂಶಗಳನ್ನು ಉತ್ತಮಗೊಳಿಸಲು ಬಹಳ ಉಪಯುಕ್ತವಾಗಿದೆ.

Google Search Console ಗೆ Account ಹೇಗೆ ತೆರೆದು ವೆಬ್‌ಸೈಟ್ Add ಮಾಡುವುದು?

1️⃣ Google Account (Gmail) ಅಳವಡಿಸಿ:

👉 https://search.google.com/search-console ಗೆ ಹೋಗಿ
👉 ನಿಮ್ಮ Gmail ID ನೊಂದಿಗೆ ಲಾಗಿನ್ ಆಗಿ

2️⃣ ನಿಮ್ಮ ವೆಬ್‌ಸೈಟ್ Add ಮಾಡಿ:

→ ಎರಡು ಆಯ್ಕೆಗಳು:

Domain Property (poorna domain ನಿಗಾವಹಣೆ):
→ ಉದಾಹರಣೆ: buzzseema.com
→ Subdomains ಕೂಡ ಸೇರಿಕೊಳ್ಳುತ್ತದೆ
DNS verification ಅಗತ್ಯವಿದೆ

URL Prefix (ಒಂದು ನಿಖರ URL):
→ ಉದಾ: https://www.buzzseema.com/
→ verification ಸದುಪಯೋಗಿ ಮತ್ತು ಸುಲಭ
→ Meta tag ಅಥವಾ file upload ಮೂಲಕ ಮಾಡುವದು ಸುಲಭ

3️⃣ Verification ಮಾಡಿ (ತ್ವರಿತ ಕ್ರಮ):

→ GSC ನಿಂದ ಕೊಡಲಾಗುವ HTML file ನನ್ನು ನಿಮ್ಮ ವೆಬ್‌ಸೈಟ್‌ನ file manager ಗೆ upload ಮಾಡಿ
ಅಥವಾ
→ GSC ನಿಂದ ದೊರಕುವ Meta tag ನ್ನು ನಿಮ್ಮ website header (Elementor/Theme settings) ನಲ್ಲಿ ಸೇರಿಸಿ

verification ಯಶಸ್ವಿಯಾದ ಮೇಲೆ ನಿಮ್ಮ ವೆಬ್‌ಸೈಟ್ GSC dashboard ಗೆ ಸೇರಿಕೊಳ್ಳುತ್ತದೆ ✅

Google Search Console Dashboard – ಮುಖ್ಯ ವಿಭಾಗಗಳು

1️⃣ Overview

→ ನಿಮ್ಮ ವೆಬ್‌ಸೈಟ್‌ನ ಪ್ರಾಥಮಿಕ ಫಲಿತಾಂಶಗಳು
→ Errors, Performance, Enhancements, ಇತ್ಯಾದಿ

2️⃣ Performance Report

→ ಈ ವಿಭಾಗದಲ್ಲಿ ನಿಮಗೆ ಬರುವ ಮಾಹಿತಿ:

ಅಂಶವಿವರಣೆ
Clicksಎಷ್ಟು ಮಂದಿ Google ನಿಂದ ನಿಮ್ಮ site ಗೆ ಬಂದಿದ್ದಾರೆ
Impressionsಎಷ್ಟು ಬಾರಿ ನಿಮ್ಮ site result ನಲ್ಲಿ ತೋರಿದೆ
CTRClicks ÷ Impressions
Average Positionನಿಮ್ಮ site ಸಿಗುವ ಸರಾಸರಿ ಸ್ಥಾನ

👉 ಇದರಿಂದ ನೀವು ಯಾವ ಯಾವ keywords ಗೆ site rank ಆಗುತ್ತಿದೆ ಎಂಬುದನ್ನು ತಿಳಿಯಬಹುದು.

3️⃣ URL Inspection Tool

→ ಯಾವುದಾದರೂ ಹೊಸ blog post ಮಾಡಿದಾಗ ಅದರ URL ಅನ್ನು ಇಲ್ಲಿ ಹಾಕಿ
→ Google ನಲ್ಲಿ indexing ಆಗುತ್ತದೆಯಾ ಇಲ್ಲವೋ ಪರಿಶೀಲಿಸಬಹುದು
→ “Request Indexing” ಆಯ್ಕೆಯ ಮೂಲಕ ತಕ್ಷಣ Google ಗೆ ತಿಳಿಸಬಹುದು

4️⃣ Coverage (Pages Report)

→ ಯಾವ ಯಾವ ಪುಟಗಳನ್ನು Google index ಮಾಡಿದೆ ಎಂಬ ಮಾಹಿತಿ
→ ಏನು ಏನು errors (404, redirect error) ಇದೆ ಎಂದು ತೋರಿಸುತ್ತದೆ

5️⃣ Sitemaps

→ ನಿಮ್ಮ ವೆಬ್‌ಸೈಟ್‌ನ sitemap URL ಅನ್ನು ಇಲ್ಲಿ ಹಾಕಬಹುದು
ಉದಾ: https://buzzseema.com/sitemap_index.xml
→ ಇದರಿಂದ Google ನಿಮ್ಮ site ಅನ್ನು ಸರಿಯಾಗಿ ಓದಬಹುದು

6️⃣ Mobile Usability

→ ನಿಮ್ಮ site ಮೊಬೈಲ್‌ನಲ್ಲಿ ಸೂಕ್ತವಾಗಿ ತೋರಿಸುತ್ತಿದೆಯಾ ಇಲ್ಲವೋ ತೋರಿಸುತ್ತದೆ
→ ಯಾವುದೇ ಸಮಸ್ಯೆ ಇದ್ದರೆ fix ಮಾಡುವುದು SEO ಗೆ ಮುಖ್ಯ

7️⃣ Links (Backlinks Report)

→ ನಿಮ್ಮ site ಗೆ ಹೊರಗಿನ ಯಾವ site ಗಳು ಲಿಂಕ್ ಕೊಡುತ್ತಿವೆ
→ ಯಾವ ಪುಟಗಳಿಗೆ ಲಿಂಕ್ ಬಂದಿದೆ
→ Anchor texts – ಎಲ್ಲಿಂದ ಯಾವ ಶಬ್ದಕ್ಕೆ link ಬಂದಿದೆ

8️⃣ Manual Penalties ಗೊತ್ತಾಗಿಸಲು:

  • Google ನಿಂದ ಯಾವುದೇ penalty ಬಂದಿದ್ರೆ GSC notification ಕೊಡುತ್ತದೆ.

  • Search visibility ತಗ್ಗಿದ್ರೆ ಇಲ್ಲಿ ಮೊದಲ clue ಸಿಗಬಹುದು.

9️⃣ International Targeting (hreflang):

  • ನಿನ್ನ site ಹಲವಾರು ಭಾಷೆಗಳಲ್ಲಿ ಇದ್ದರೆ, hreflang settings ನ GSC ಮೂಲಕ verify ಮಾಡಬಹುದು.

1️⃣0️⃣ URL Removal Requests:

  • ಬೇಕಾದರೆ ನಿನ್ನ ಕೆಲವು pages ನ್ನು Google result ನಿಂದ ತಾತ್ಕಾಲಿಕವಾಗಿ ತೆಗೆದುಹಾಕಬಹುದು.

➤ “Removals” option ಉಪಯೋಗಿಸಬಹುದು.

Leave a Comment

Your email address will not be published. Required fields are marked *

Scroll to Top